ಸಮಾವರ್ತನ - ಕಾಶೀ ಯಾತ್ರೆ

Submitted by ಪಾರ್ವತಿ ಗಣಪತಿ ಹೆಗಡೆ on ಭಾನು, 03/01/2015 - 21:24

ಷೋಡಶ ಸಂಸ್ಕಾರಗಳಲ್ಲಿ ಹನ್ನೆರಡನೆಯದಾದ ಸಮಾವರ್ತನ ವಿದ್ಯಾರ್ಥಿ ಜೀವನದ ಮುಕ್ತಾಯವನ್ನು ಗುರುತಿಸುತ್ತದೆ. ಅಂದರೆ, ಬ್ರಹ್ಮಚರ್ಯ ಅವಧಿಯನ್ನು ಪೂರ್ತಿಗೊಳಿಸಿ ಮತ್ತು ಗೃಹಸ್ಥಾಶ್ರಮವನ್ನು ಪ್ರವೇಶಿಸಲು ಗುರುವಿನ ಅಪ್ಪಣೆ ಕೋರುವ ಸಮಯ.

ಪೂಜಿಸಿದಳು ಗೌರಿಯ ರಿಕುಮಿಣಿದೇವಿ ಪೂಜಿಸಿದಳು ಗೌರಿಯಾ

Submitted by ಪಾರ್ವತಿ ಗಣಪತಿ ಹೆಗಡೆ on ಭಾನು, 10/19/2014 - 18:26

ಪೂಜಿಸಿದಳು ಗೌರಿಯ ರಿಕುಮಿಣಿದೇವಿ ಪೂಜಿಸಿದಳು ಗೌರಿಯಾ | ಪೂಜಿಸಿದಳತಿ ಮೋದದಿಂದದಲಿ | ಮೋದಕ ಪ್ರಿಯನನ್ನೆ ಭಜಿಸುತ ರಾಜಿಸುವ ಮಣಿನಯದ ಪೀಠದಿ ಬಾಲೆ ರುಗುವಿಣಿ ಓಜೆಯಿಂದಲಿ ||ಪ||

ಮಂಡಲಗಳ ರಚಿಸಿ ಶ್ರೀ ಸರಸ್ವತಿಗೆ ಮಂಡಿಯೂರಿ ನಮಿಸಿ ಪುಂಡಾರೀಕಾಕ್ಷನೆ ಪತಿಯಾಗಬೇಕೆಂದು ಚೆಂಡಿಕೆ ಪಾದದೊಳ್ ಇಂದು ನಮಿಸುತಾ ||೧||

ನೀಲಕಂಠನ ರಾಣಿಯಾ ಪೂಜಿಸಿದಳು ಬಾಲೆ ರುಗುವಿಣಿ ದೇವಿಯು | ನೀಲವರ್ಣನೆ ತನ್ನ ಪತಿಯಾಗಬೇಕೆಂದು ಚಂದ್ರಮೌಳಿಯ ಪೂಜೆ ಲೋಲೆ ಮಾಡಿಸಿದಿಳಿಂದು ||೨||

ಅಂಗನೆ ರುಗುವಿಣಿದೇವಿಯು ಪೂಜಿಸಿದಳು ಗಂಗಾಧರನ ಪಾದವಾ | ಮಂಗಲಾಕ್ಷತೆಯಿಂದ ಪೂಜೆಯನರ್ಪಿಸಿ ಮಂಗಳಗೌರಿಯು ಬಾಗಿನಗಳ ಕೊಟ್ಟು ||೩||

ಹವ್ಯಕ