ಸಾವಿರಾರು ವರುಷದ ಇತಿಹಾಸ ಪರಂಪರೆಯಲ್ಲಿ ನಮ್ಮ ಜೀವನ ಒಂದು ಕೊಂಡಿ ಮಾತ್ರ. ಸಂಸ್ಕೃತಿ, ನಾಡು ನುಡಿನ್ನು  ನಾವಷ್ಟೆ ಅಲ್ಲೆದೆ ಅದನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ . ಈಗಿನ ಪಾಷ್ಚಾತ್ಯ ಓಟದ ಜೀವನ ಶೈಲಿಯ ನಡುವೆ, ಅವು ಮರೆತು ಹೋಗುವ ಮುನ್ನ,  ಚಿಕ್ಕಂದಿನಲ್ಲಿ ನೋಡಿದ, ಕಲಿತ ಅದೆಷ್ಟೋ ವಿಷಯಗಳಲ್ಲಿ, ಕೆಲವನ್ನಾದರೂ ಒಟ್ಟು ಮಾಡುವ ಕೆಲಸ ಮಾಡಬೇಕಿದೆ.

ಆಧುನಿಕತೆಯಿಂದಾಗಿ ಗ್ರಾಮೀಣ ಭಾಗದ ಕಲೆ, ಸಂಸ್ಕೃತಿ, ಆಟ, ಪಾಠ, ವಿಚಾರಗಳು ಮರೆಯಾಗುತ್ತಿದೆ  ಎನ್ನಲು ವಿಷಾದವಾಗುತ್ತಿದೆ. ಆಧುನಿಕತೆಯ ಸೆಳೆತ ಗ್ರಾಮೀಣ ಬದುಕನ್ನು ನುಂಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿನ ಸರಳ ಬದುಕು, ಸ್ವಚ್ಚಗಾಳಿ, ನೀರು, ನೆಮ್ಮದಿಯ ಜೀವನ, ನಿಸರ್ಗ ಪ್ರೀತಿ ಮತ್ತು ಸಾಮರಸ್ಯದ ಬದುಕು ಕಾಣೆಯಾಗುತ್ತಿರುವ ಈ ದಿನಗಳಲ್ಲಿ, ಅದರ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ. ಪ್ರತಿ ೧೦೦ ಕಿ.ಮೀ.ಗಳಿಗೆ ಬದಲಾಗುವ ನಮ್ಮ ನಾಡು, ನುಡಿ, ಆಹಾರ, ಸಂಸ್ಕೃತಿ, ವೇಷಭೂಷಣಗಳು ವಿವಿಧತೆಯಲ್ಲಿ ಏಕತೆಯನ್ನು ಸಾರುತ್ತಿದೆ. ಹೀಗೆ ಅನೇಕ ಜಾನಪದ ಕಲೆ, ಸಂಸ್ಕೃತಿಗಳು ಊರಿಂದೂರಿಗೆ ವಿವಿಧಬಗೆಯಲ್ಲಿದೆ (ಯಕ್ಷಗಾನ, ಡೊಳ್ಳುಕುಣಿತ, ಕೋಲಾಟ, ಗೊಂಬೆಯಾಟ, ನಾಟಕ, ಇತ್ಯಾದಿ). ಅನೇಕ ಗ್ರಾಮೀಣ ಕ್ರೀಡೆಗಳು (ಲಗೋರಿ, ಕಬಡ್ಡಿ, ಚಿನ್ನಿದಾಂಡು...ಇತ್ಯಾದಿ) ಕ್ರಿಕೆಟ್ ಎಂಬ ಆಂಗ್ಲಮಾಯೆಯ ಮುಂದೆ ಬೆಳಕು ಕಾಣದೆ ಶರಣಾಗಿ ಮೂಲೆಗುಂಪಾಗುವತ್ತ ಸಾಗಿದೆ. ಅವೆಲ್ಲವನ್ನು ಉಳಿಸುವ ಹಾಗೂ ಮುಂದಿನ ಪೀಳಿಗೆಗೆ ವರ್ಗಾಯಿಸುವ, ಜಾನಪದ ಕಲೆ ಹಾಗೂ ಸಂಸ್ಕೃತಿಗಳ ಪರಿಚಯ ಮಾಡಿಸುವ ಕೆಲಸವಾಗಬೇಕಿದೆ.

ಇತ್ತೀಚಿನ ದಿನಗಳಲ್ಲಿ ಭಾಗಷಃ ಯುವಕರೆಲ್ಲರೂ ನಗರಕ್ಕೆ ವಲಸೆ ಹೋಗುವ ಮೂಲಕ, ಕೃಷಿ ಆಧಾರಿತ ಅನೇಕ ಸಂಗತಿಗಳು ಮರೆಯಾಗುತ್ತಿದೆ. ಅನೇಕ ವಿಚಾರಗಳು ನಗರ ಕೇಂದ್ರಿತವಾಗುತ್ತಿವೆ. ಗ್ರಾಮ, ಹಳ್ಳಿಗಳು ನಶಿಸುವ ಮೂಲಕ ಗ್ರಾಮೀಣ ಸಂಸ್ಕೃತಿ ವಿನಾಶದೆಡೆಗೆ ಸಾಗುತ್ತಿದೆ. ಅದಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಇರುವ ಕಲೆ ಇಂದಿನ ದಿನಗಳಲ್ಲಿ ಮರೆಯಾಗುತ್ತಿದೆ. ಆಧುನಿಕತೆಯ ಓಟದ ಜೀವನದ ಮದ್ಯೆ ನಮ್ಮ ಅಮೂಲ್ಯ ಗ್ರಾಮೀಣ ಕಲೆ ಮರೆಯಾಗುತ್ತಿ ರುವ ಹಿನ್ನೆಲೆಯಲ್ಲಿ ಅದನ್ನು ಉಳಿಸಿ, ಬೆಳೆಸುವ, ಜಾನಪದ ಗ್ರಾಮ್ಯ ಸೊಗಡನ್ನು,, ಗ್ರಾಮೀಣ ಪ್ರದೇಶದ ಆಟ, ಕಲೆ, ಸಾಹಿತ್ಯ ಮತ್ತು ಸಂಸ್ಕ್ಕತಿಯನ್ನು ಮುಂದಿನ ಪೀಳಿಗೆಗಾಗಿ ಜೀವಂತವಾಗಿರಿಸುವುದು ಇವತ್ತಿನ  ಅತಿ ಅಗತ್ಯ ಅಂಶವಾಗಿದೆ.

ನಾಡು, ನುಡಿ ಮತ್ತು ಸಂಸ್ಕೃತಿಯನ್ನು (ಚಿತ್ರ, ವಿಡಿಯೊ, ಲೇಖನ ಇತ್ಯಾದಿ) ಬಿಂಬಿಸುವ ಯಾವುದೇ ತರಹದ ವಿಚಾರಗಳಿದ್ದರೆ ಅದನ್ನು ಒಟ್ಟು ಮಾಡಿ ಇಲ್ಲಿ ದಾಖಲಿಸುವ.

ಏಕೀ ಸಮ್ಮಿಲನ?