ಪೂಜಿಸಿದಳು ಗೌರಿಯ ರಿಕುಮಿಣಿದೇವಿ ಪೂಜಿಸಿದಳು ಗೌರಿಯಾ

Body: 

ಪೂಜಿಸಿದಳು ಗೌರಿಯ ರಿಕುಮಿಣಿದೇವಿ ಪೂಜಿಸಿದಳು ಗೌರಿಯಾ |
ಪೂಜಿಸಿದಳತಿ ಮೋದದಿಂದದಲಿ |
ಮೋದಕ ಪ್ರಿಯನನ್ನೆ ಭಜಿಸುತ ರಾಜಿಸುವ ಮಣಿನಯದ ಪೀಠದಿ ಬಾಲೆ ರುಗುವಿಣಿ ಓಜೆಯಿಂದಲಿ ||ಪ||

ಮಂಡಲಗಳ ರಚಿಸಿ ಶ್ರೀ ಸರಸ್ವತಿಗೆ ಮಂಡಿಯೂರಿ ನಮಿಸಿ ಪುಂಡಾರೀಕಾಕ್ಷನೆ ಪತಿಯಾಗಬೇಕೆಂದು ಚೆಂಡಿಕೆ ಪಾದದೊಳ್ ಇಂದು ನಮಿಸುತಾ ||೧||

ನೀಲಕಂಠನ ರಾಣಿಯಾ ಪೂಜಿಸಿದಳು ಬಾಲೆ ರುಗುವಿಣಿ ದೇವಿಯು | ನೀಲವರ್ಣನೆ ತನ್ನ ಪತಿಯಾಗಬೇಕೆಂದು ಚಂದ್ರಮೌಳಿಯ ಪೂಜೆ ಲೋಲೆ ಮಾಡಿಸಿದಿಳಿಂದು ||೨||

ಅಂಗನೆ ರುಗುವಿಣಿದೇವಿಯು ಪೂಜಿಸಿದಳು ಗಂಗಾಧರನ ಪಾದವಾ |
ಮಂಗಲಾಕ್ಷತೆಯಿಂದ ಪೂಜೆಯನರ್ಪಿಸಿ ಮಂಗಳಗೌರಿಯು ಬಾಗಿನಗಳ ಕೊಟ್ಟು ||೩||

ಪುನ್ನಾಗ ಜಾಜಿಯಿಂ ಪೂಜಿಸಿದಳು ಪನ್ನಗವೇಣಿಯು ತಾ |
ಹೊನ್ನ ಮಾಣಿಕದಾರತಿಯ ಬೆಳಗುತ ಸೋದರತ್ತೆಯರಿಗೆ ಬಾಗಿನವನೆ ಕೊಟ್ಟು ||೪||