ಬೆಣ್ಣೆಕಾಯಿ ಅಥವಾ ಉಗ್ರೆ ಕಾಯಿ ಬಳ್ಳಿ ಮಲೆನಾಡಿನ ಕಾಡಿನಲ್ಲಿ ಬೆಳೆಯುವ ಬಳ್ಳಿ. ಬೇರು ಔಷಧೀಯ ಗುಣ ಹೊಂದಿದ್ದು ಕಾಯಿಗಳನ್ನು ದೀಪಾವಳಿ ಹಬ್ಬದಲ್ಲಿ ದನಗಳ ಕೊರಳಿಗೆ ಹಾರ ಮಾಡಿ ಹಾಕಲು ಬಳಸುವುದು ವಾಡಿಕೆ. ಅವುಗಳಲ್ಲಿ ದೊಡ್ಡ ಕಾಯಿಗಳಿಗೆ ಪುಟ್ಟದೊಂದು (ಅಗರಬತ್ತಿಯ ಉರಿದುಳಿದ ಕಡ್ಡಿ ವಾ ಬೆಂಕಿಕಡ್ಡಿ ಯಾದರೂ ಸರಿ) ಕಡ್ಡಿಯನ್ನು ಚುಚ್ಚಿದರೆ ಬೆಣ್ಣೆಕಾಯಿ ಬುಗರಿ ಖರ್ಚಿಲ್ಲದೇ ಆಟಕ್ಕೆ ತಯಾರಿ.
ಮೇಲ್ಭಾಗದಲ್ಲಿ ಕಡ್ಡಿಯನ್ನು ಎರಡು ಬೆರಳಿನಲ್ಲಿ ಹಿಡಿದು ತಿರುಗಿಸಿಬಿಟ್ಟರೆ ಸುಮಾರು ಒಂದು ನಿಮಿಷಗಳವರೆಗೂ ತಿರುಗುತ್ತಲೇ ಇರುವ ಸರಳ ಬುಗುರಿ ಮಕ್ಕಳಿಗೆ ಅಚ್ಚುಮೆಚ್ಚು.