ಪೂಜಿಸಿದಳು ಗೌರಿಯ ರಿಕುಮಿಣಿದೇವಿ ಪೂಜಿಸಿದಳು ಗೌರಿಯಾ | ಪೂಜಿಸಿದಳತಿ ಮೋದದಿಂದದಲಿ | ಮೋದಕ ಪ್ರಿಯನನ್ನೆ ಭಜಿಸುತ ರಾಜಿಸುವ ಮಣಿನಯದ ಪೀಠದಿ ಬಾಲೆ ರುಗುವಿಣಿ ಓಜೆಯಿಂದಲಿ ||ಪ||
ಮಂಡಲಗಳ ರಚಿಸಿ ಶ್ರೀ ಸರಸ್ವತಿಗೆ ಮಂಡಿಯೂರಿ ನಮಿಸಿ ಪುಂಡಾರೀಕಾಕ್ಷನೆ ಪತಿಯಾಗಬೇಕೆಂದು ಚೆಂಡಿಕೆ ಪಾದದೊಳ್ ಇಂದು ನಮಿಸುತಾ ||೧||
ನೀಲಕಂಠನ ರಾಣಿಯಾ ಪೂಜಿಸಿದಳು ಬಾಲೆ ರುಗುವಿಣಿ ದೇವಿಯು | ನೀಲವರ್ಣನೆ ತನ್ನ ಪತಿಯಾಗಬೇಕೆಂದು ಚಂದ್ರಮೌಳಿಯ ಪೂಜೆ ಲೋಲೆ ಮಾಡಿಸಿದಿಳಿಂದು ||೨||
ಅಂಗನೆ ರುಗುವಿಣಿದೇವಿಯು ಪೂಜಿಸಿದಳು ಗಂಗಾಧರನ ಪಾದವಾ | ಮಂಗಲಾಕ್ಷತೆಯಿಂದ ಪೂಜೆಯನರ್ಪಿಸಿ ಮಂಗಳಗೌರಿಯು ಬಾಗಿನಗಳ ಕೊಟ್ಟು ||೩||
ಪುನ್ನಾಗ ಜಾಜಿಯಿಂ ಪೂಜಿಸಿದಳು ಪನ್ನಗವೇಣಿಯು ತಾ | ಹೊನ್ನ ಮಾಣಿಕದಾರತಿಯ ಬೆಳಗುತ ಸೋದರತ್ತೆಯರಿಗೆ ಬಾಗಿನವನೆ ಕೊಟ್ಟು ||೪||