ಬ್ರಾಹ್ಮಣ

  1. ಯಜ್ಞೋಪವೀತದ ಮಹತ್ವ

    ತಲೆತಲಾಂತರದಿಂದ ಬ್ರಾಹ್ಮಣ ಗಳಿಸುತ್ತಿರುವ ಯಶಸ್ಸಿನ ಗುಟ್ಟು ಬಯಲು. ಅದುವೇ ಯಜ್ಞೋಪವೀತ ಧಾರಣೆ: ಯಜ್ಞೋಪವೀತಕ್ಕೆ ಉಪವೀತ, ಯಜ್ಞಸೂತ್ರ, ವ್ರತಬಂಧ, ಬಲಬಂಧ, ಮೊನೀಬಂಧ ಹಾಗೂ ಬ್ರಹ್ಮಸೂತ್ರ ಎಂಬ ಹಲವಾರು ಹೆಸರುಗಳಿವೆ. ಕನ್ನಡದಲ್ಲಿ ಯಜ್ಞೋಪವೀತಕ್ಕೆ ಜನಿವಾರವೆಂದು ಕರೆಯುತ್ತಾರೆ. ಯಜ್ಞೋಪವೀತವನ್ನು ಧರಿಸುವ ಪರಂಪರೆ ಬಹಳ ಪ್ರಾಚೀನವಾದದ್ದು. ಉಪನಯನದ ಅನಂತರ ಯಜ್ಞೋಪವೀತವನ್ನು ಧರಿಸಲಾಗುತ್ತದೆ. "ಉಪನಯನ" ಎಂದರೆ ಹತ್ತಿರಕ್ಕೆ ತರುವುದು. ಯಾರ ಹತ್ತಿರ? ಎಂದರೆ ಬ್ರಹ್ಮಜ್ಞಾನದ ಹತ್ತಿರ. ಹಿಂದೂ ಧರ್ಮದ ಷೋಡಶ ಸಂಸ್ಕಾರಗಳಲ್ಲಿ ಉಪನಯನವೂ ಒಂದು. ಉಪನಯನ ಸಂಸ್ಕಾರದಲ್ಲಿ ಯಜ್ಞೋಪವೀತದ ಧಾರಣೆಯಾಗುತ್ತದೆ. ಉಪನಯನಕ್ಕೆ "ಯಜ್ಞೋಪವೀತ ಸಂಸ್ಕಾರ" ಎಂಬ ಹೆಸರೂ ಇದೆ.