ಜಾಯಿಕಾಯಿ ಸಾಂಬಾರ ಪದಾರ್ಥವಾಗಿ ಎಲ್ಲರಿಗೂ ಚಿರಪರಿಚಿತವಾದ ವಸ್ತು. 'ಇಂಗ್ಲೀಷ್'ನಲ್ಲಿ Myristica (NutmegMyristicaMyristicaMyristicaMyristica..) ಎಂದು ಕರೆಯಲಾಗುವ ಜಾಯಿಕಾಯಿ, ಮೈರಿಸ್ಟಿಕಾಸಿ(Myristicaceae)ಕುಟುಂಬಕ್ಕೆ ಸೇರಿದ್ದು, ಮೈರಿಸ್ಟಿಕ ಫ್ರಾಗ್ರನ್ಸ್ (Myristica Fragrans)ಎಂದು ಸಸ್ಯ ಶಾಸ್ತ್ರೀಯ ಹೆಸರು ಪಡೆದಿದೆ. ಸಂಸ್ಕೃತದಲ್ಲಿ ಜಾತಿ ಫಲ,ವೆಂದು ಕರೆಯಲಾಗುವ ವನಸ್ಪತಿಯ ಉಪಯೋಗಗಳು ಹಲವಾರು. 'ಮನೆಯ ವೈದ್ಯರಾಜ'ನೆಂದು ಹೆಸರಾದ ವನಸ್ಪತಿಯಾಗಿ,ನೂರಾರು ವರ್ಷಗಳಿಂದ 'ಭಾರತೀಯರ ಅಡುಗೆಮನೆಯಲ್ಲಿ ಖಾಯಂಸ್ಥಾನ'ವನ್ನು ಗಳಿಸಿದೆ. ಹಾಗಾಗಿ ಜಾಯಿಕಾಯಿ ಔಷಧೀಯ ಗುಣಗಳಿಂದಲೂ, ವಾಣಿಜ್ಯಿಕವಾಗಿಯೂ ಬಹಳ ಪ್ರಮುಖವಾದ ವನಸ್ಪತಿ. ಸಿಹಿ ತಿನಿಸುಗಳಿಗೆ ಅದರ ಒಂದು ಚಿಟಿಕೆ ಪುಡಿ ಬೆರೆಸಿದರೆ ಪರಿಮಳ ಮಾತ್ರವಲ್ಲ ರುಚಿಯೇ ಬೇರೆ. ಹಾಗೆಯೇ ಮನೆ ಮದ್ದಿನ ಹಲವು ಉಪಯೋಗಗಳೂ ಅದರಿಂದ ಆಗುತ್ತವೆ.
ಬಹು ಉಪಯೋಗಿಯಾದ ಜಾಯಿಕಾಯಿ ಮರ, ಪ್ರಕೃತಿಯ ಅಮೂಲ್ಯ ಕೊಡುಗೆ., ಮೂಲತ: ಉಷ್ಣವಲಯದಲ್ಲಿ ಬೆಳೆಯುತ್ತದೆ.ಕರ್ನಾಟಕದಲ್ಲಿ ಗಿಡವನ್ನು ಬೇರೆ ದೇಶಗಳಿಂದ ಆಮದು ಮಾಡಿ ನೆಡಲಾಗಿದೆ.
ಮಲೆನಾಡಿನ ಅಡಿಕೆ ತೋಟದಲ್ಲಿ ಜಾಯಿಕಾಯಿಯನ್ನು ಉಪಬೆಳೆಯಾಗಿ ಬೆಳೆಯುತ್ತಿದ್ದಾರೆ.
ವಿಕೀಪೀಡಿಯ ಕೊಂಡಿ: kn.wikipedia.org/wiki/ಜಾಯಿಕಾಯಿ .