ಕುಮಾರ ವ್ಯಾಸ ಭಾರತ - ಆದಿ ಪರ್ವ ಭಾಗ ೧

Submitted by ಸುಧೀಂದ್ರ on ಶನಿ, 01/17/2015 - 17:56

ಗಮಕ ಕಲೆ ಗದ್ಯ ಮತ್ತು ಚಂಪೂ ಕಾವ್ಯವನ್ನು ರಾಗಬದ್ಧವಾಗಿ ಓದುವ ಕ್ರಮ. ಬಹುಷಃ ಭಾರತೀಯ ಭಾಷೆಗಳಲ್ಲೇ ಕನ್ನಡದಲ್ಲಿ ಮಾತ್ರ ಕಂಡುಬರುವ ಒಂದು ಪ್ರಕಾರ. ಅದರಲ್ಲೂ ಗಮಕವು ಮಲೆನಾಡು ಭಾಗದಲ್ಲೇ ಹೆಚ್ಚಾಗಿ ವಿಕಸಿತವಾಗಿದ್ದು ಮತ್ತೊಂದು ವಿಶೇಷ.

ಕುಮಾರವ್ಯಾಸ ಭಾರತ ಆದಿಪರ್ವದ ವಾಚನದ ಒಂದು ತುಣುಕು.

ವಾಚನ: ಶ್ರೀ ಹೊಸಹಳ್ಳಿ ಕೇಶವಮೂರ್ತಿ

ವ್ಯಾಖ್ಯಾನ: ಶ್ರೀ ಮತ್ತೂರು ಕೃಷ್ಣಮೂರ್ತಿ

ಬೆಣ್ಣೆ ಕಾಯಿ ಬುಗರಿ

Submitted by devaru.rbhat on ಮಂಗಳ, 10/28/2014 - 22:50

ಬೆಣ್ಣೆಕಾಯಿ ಅಥವಾ ಉಗ್ರೆ ಕಾಯಿ ಬಳ್ಳಿ ಮಲೆನಾಡಿನ ಕಾಡಿನಲ್ಲಿ ಬೆಳೆಯುವ ಬಳ್ಳಿ.  ಬೇರು ಔಷಧೀಯ ಗುಣ ಹೊಂದಿದ್ದು ಕಾಯಿಗಳನ್ನು ದೀಪಾವಳಿ ಹಬ್ಬದಲ್ಲಿ ದನಗಳ ಕೊರಳಿಗೆ ಹಾರ ಮಾಡಿ ಹಾಕಲು ಬಳಸುವುದು ವಾಡಿಕೆ.  ಅವುಗಳಲ್ಲಿ ದೊಡ್ಡ ಕಾಯಿಗಳಿಗೆ ಪುಟ್ಟದೊಂದು (ಅಗರಬತ್ತಿಯ ಉರಿದುಳಿದ ಕಡ್ಡಿ ವಾ ಬೆಂಕಿಕಡ್ಡಿ ಯಾದರೂ ಸರಿ) ಕಡ್ಡಿಯನ್ನು ಚುಚ್ಚಿದರೆ ಬೆಣ್ಣೆಕಾಯಿ ಬುಗರಿ ಖರ್ಚಿಲ್ಲದೇ ಆಟಕ್ಕೆ ತಯಾರಿ.

ಮೇಲ್ಭಾಗದಲ್ಲಿ ಕಡ್ಡಿಯನ್ನು ಎರಡು ಬೆರಳಿನಲ್ಲಿ ಹಿಡಿದು ತಿರುಗಿಸಿಬಿಟ್ಟರೆ ಸುಮಾರು ಒಂದು ನಿಮಿಷಗಳವರೆಗೂ ತಿರುಗುತ್ತಲೇ ಇರುವ ಸರಳ ಬುಗುರಿ ಮಕ್ಕಳಿಗೆ ಅಚ್ಚುಮೆಚ್ಚು.

ಪೂಜಿಸಿದಳು ಗೌರಿಯ ರಿಕುಮಿಣಿದೇವಿ ಪೂಜಿಸಿದಳು ಗೌರಿಯಾ

Submitted by ಪಾರ್ವತಿ ಗಣಪತಿ ಹೆಗಡೆ on ಭಾನು, 10/19/2014 - 18:26

ಪೂಜಿಸಿದಳು ಗೌರಿಯ ರಿಕುಮಿಣಿದೇವಿ ಪೂಜಿಸಿದಳು ಗೌರಿಯಾ | ಪೂಜಿಸಿದಳತಿ ಮೋದದಿಂದದಲಿ | ಮೋದಕ ಪ್ರಿಯನನ್ನೆ ಭಜಿಸುತ ರಾಜಿಸುವ ಮಣಿನಯದ ಪೀಠದಿ ಬಾಲೆ ರುಗುವಿಣಿ ಓಜೆಯಿಂದಲಿ ||ಪ||

ಮಂಡಲಗಳ ರಚಿಸಿ ಶ್ರೀ ಸರಸ್ವತಿಗೆ ಮಂಡಿಯೂರಿ ನಮಿಸಿ ಪುಂಡಾರೀಕಾಕ್ಷನೆ ಪತಿಯಾಗಬೇಕೆಂದು ಚೆಂಡಿಕೆ ಪಾದದೊಳ್ ಇಂದು ನಮಿಸುತಾ ||೧||

ನೀಲಕಂಠನ ರಾಣಿಯಾ ಪೂಜಿಸಿದಳು ಬಾಲೆ ರುಗುವಿಣಿ ದೇವಿಯು | ನೀಲವರ್ಣನೆ ತನ್ನ ಪತಿಯಾಗಬೇಕೆಂದು ಚಂದ್ರಮೌಳಿಯ ಪೂಜೆ ಲೋಲೆ ಮಾಡಿಸಿದಿಳಿಂದು ||೨||

ಅಂಗನೆ ರುಗುವಿಣಿದೇವಿಯು ಪೂಜಿಸಿದಳು ಗಂಗಾಧರನ ಪಾದವಾ | ಮಂಗಲಾಕ್ಷತೆಯಿಂದ ಪೂಜೆಯನರ್ಪಿಸಿ ಮಂಗಳಗೌರಿಯು ಬಾಗಿನಗಳ ಕೊಟ್ಟು ||೩||

ಏಕೀ ಸಮ್ಮಿಲನ? ಸುಧೀಂದ್ರ ಧ, 03/28/2012 - 21:28

ಸಾವಿರಾರು ವರುಷದ ಇತಿಹಾಸ ಪರಂಪರೆಯಲ್ಲಿ ನಮ್ಮ ಜೀವನ ಒಂದು ಕೊಂಡಿ ಮಾತ್ರ. ಸಂಸ್ಕೃತಿ, ನಾಡು ನುಡಿನ್ನು  ನಾವಷ್ಟೆ ಅಲ್ಲೆದೆ ಅದನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ . ಈಗಿನ ಪಾಷ್ಚಾತ್ಯ ಓಟದ ಜೀವನ ಶೈಲಿಯ ನಡುವೆ, ಅವು ಮರೆತು ಹೋಗುವ ಮುನ್ನ,  ಚಿಕ್ಕಂದಿನಲ್ಲಿ ನೋಡಿದ, ಕಲಿತ ಅದೆಷ್ಟೋ ವಿಷಯಗಳಲ್ಲಿ, ಕೆಲವನ್ನಾದರೂ ಒಟ್ಟು ಮಾಡುವ ಕೆಲಸ ಮಾಡಬೇಕಿದೆ.