ಜೋಗಿ - ತಂಬೂರಿ

ಸುಮಾರಾಗಿ ಆನವಟ್ಟಿ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸವಾಗಿರುವ ಜೋಗಿ ಜನಾಂಗದವರು ಜೋಗೇರಾಟ ಎನ್ನುವ ವಿಶಿಷ್ಟ ಜಾನಪದ ಕಲೆಯನ್ನು ಪ್ರದರ್ಶನ ನೀಡುವುದು ಸಾಮಾನ್ಯ.  ಇವರು ಮೂಲತಃ ಕೃಷಿಕರು/ ಕೃಷಿ ಕಾರ್ಮಿಕರು.  ದೀಪಾವಳಿಯ ನಂತರ ತಮ್ಮ ಸುಗ್ಗಿ ಕೆಲಸಗಳನ್ನು ಪೂರೈಸಿದ ನಂತರ ತಮ್ಮದೇ ಆದ ವಿಶಿಷ್ಟವಾದ್ಯ ಪರಿಕರ (ಏಕತಾರಿ/ ಏಕನಾರಿ/ ತಂಬೂರಿ ಬುರುಡೆ)ವನ್ನು ತೆಗೆದುಕೊಂಡು ಊರೂರು ಸುತ್ತಿ ದಾಸರ ಪದವೇ ಮೊದಲಾದ ದೇವರ ನಾಮಗಳನ್ನು ಗೆಜ್ಜೆಯ ನಾದ ಬೀರುವ ಹೆಬ್ಬೆರಳಲ್ಲಿ ಸಿಕ್ಕಿಸಿಕೊಳ್ಳಬಹುದಾದ ಉಂಗುರವನ್ನು ಹಿಡಿದು ಏಕತಾರಿಯ ನಾದಕ್ಕೆ ಶೃತಿ ಸೇರಿಸಿ ಹಾಡುತ್ತಾ ಬರುತ್ತಾರೆ.  ಇವರಿಗೆ ರೈತಾಪಿ ವರ್ಗದವರು ತಮ್ಮಲ್ಲಿ ಬೆಳೆದ ಧವಸ ಧಾನ್ಯ,ಅಡಿಕೆ ಯನ್ನು ಸಂಭಾವನೆಯಾಗಿ ನೀಡುತ್ತಾರೆ.  ಮೊದಲು ಇಬ್ಬರು ಒಟ್ಟೊಟ್ಟಿಗೆ ಬರುತ್ತಿದ್ದರು ಈಗ ಬದಲಾದ ದಿ

ಸಮಾವರ್ತನ - ಕಾಶೀ ಯಾತ್ರೆ

ಷೋಡಶ ಸಂಸ್ಕಾರಗಳಲ್ಲಿ ಹನ್ನೆರಡನೆಯದಾದ ಸಮಾವರ್ತನ ವಿದ್ಯಾರ್ಥಿ ಜೀವನದ ಮುಕ್ತಾಯವನ್ನು ಗುರುತಿಸುತ್ತದೆ. ಅಂದರೆ, ಬ್ರಹ್ಮಚರ್ಯ ಅವಧಿಯನ್ನು ಪೂರ್ತಿಗೊಳಿಸಿ ಮತ್ತು ಗೃಹಸ್ಥಾಶ್ರಮವನ್ನು ಪ್ರವೇಶಿಸಲು ಗುರುವಿನ ಅಪ್ಪಣೆ ಕೋರುವ ಸಮಯ.

ಪುಟಗಳು(_e):